(Comments)

ದಾದಾ ಸಾಹೇಬ್​ ಪುರಸ್ಕೃತ ಕಿರು ಚಿತ್ರ 'ದಿ ಬೆಸ್ಟ್​ ಆ್ಯಕ್ಟರ್​' ಮತ್ತೆ ನಿಮ್ಮ ಮುಂದೆ

ಕನ್ನಡ ಚಿತ್ರರಂಗ ಈಗ ಬದಲಾಗಿದೆ. ಬೆರಳೆಣಿಕೆಯಿದ್ದ ಪ್ರಯೋಗಾತ್ಮಕ ಚಿತ್ರಗಳು ಈಗ ಅಸಂಖ್ಯ ಪ್ರಮಾಣಕ್ಕೆ ಏರಿವೆ. ಕನ್ನಡದಲ್ಲಿ ಕಿರುಚಿತ್ರಗಳೂ ತಮ್ಮದೇ ಛಾಪು ಮೂಡಿಸುತ್ತಿವೆ.

ಉತ್ತಮ ಕಥಾಹಂದರ ಮತ್ತು ವಿಭಿನ್ನ ನಿರೂಪಣೆ, ಶೈಲಿಯಿಂದ ಕನ್ನಡದ ಕಿರು ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ಭಾರತ ಚಿತ್ರರಂಗಕ್ಕೇ ಹೆಮ್ಮೆಯ ಸಂಗತಿಯಾಗಿದೆ. ಅಂತಹ ಸಾಲಿಗೆ ಸೇರಿದ ಪ್ರಮುಖ ಕಿರುಚಿತ್ರವೆಂದರೆ ಅದು 'ದಿ ಬೆಸ್ಟ್​ ಆ್ಯಕ್ಟರ್​'.

the best actor movie

ನಾಗರಾಜ್​ ಸೋಮಯಾಜಿ ನಿರ್ದೇಶನ ಮತ್ತು ಚಿತ್ರಕಥೆ ಹೊಂದಿರುವ ಈ ಚಿತ್ರವು ದಿನೇಶ್​ ವೈದ್ಯ ಅಂಪರು ಮತ್ತು ಸರ್ವಸ್ವ ಪ್ರೊಡಕ್ಷನ್​ ಅಡಿಯಲ್ಲಿ ನಿರ್ಮಾಣವಾಗಿದೆ. ಚಿತ್ರ ಬಿಡುಗಡೆಯಾಗಿ ಅಂತಾರಾಷ್ಟ್ರೀಯ ಮನ್ನಣೆಯನ್ನೂ ಪಡೆದುಕೊಂಡಿದೆ. ಅಲ್ಲದೆ ಮುಖ್ಯವಾಗಿ ಎಸ್​.ಕೆ ರಾವ್​ ಅವರ ಛಾಯಾಗ್ರಹಣಕ್ಕೆ ಭಾರತದ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಯಾದ ದಾದಾ ಸಾಹೇಬ್​ ಪಾಲ್ಕೆ ಪ್ರಶಸ್ತಿ ಚಿತ್ರಕ್ಕೆ ಸುವರ್ಣ ಗರಿ ಮೂಡಿಸಿದೆ.

ಇಷ್ಟೆಲ್ಲಾ ಚಿತ್ರದ ಬಗ್ಗೆ ಹೇಳಲು ಕಾರಣವಿದೆ. ಚಿತ್ರ ರಸಿಕರಿಗೆ ರಸ ನಿಮಿಷಗಳನ್ನು ಮತ್ತೆ ಉಣಬಡಿಸಲು ಈ ಕಿರುಚಿತ್ರ ಈಗ ಮತ್ತೆ ತೆರೆಯ ಮೇಲೆ ಅಪ್ಪಳಿಸಲಿದೆ.

ಚಿತ್ರವು ಇದೇ ಜುಲೈ 27 ರಂದು ಬನಶಂಕರಿಯ ಸುಚಿತ್ರ ಚಿತ್ರಮಂದಿರದಲ್ಲಿ ಸಂಜೆ 4.30 ರಿಂದ 7.30ರ ಸಮಯದಲ್ಲಿ ಒಂದು ತಾಸುಗಳ ಅಂತರದಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರವನ್ನು ನೋಡಲು ಇಚ್ಛಿಸುವವರು ಮೊದಲೇ ತಮ್ಮ ಟಿಕೆಟ್​ ನ್ನು www.sarvapro.com ನಲ್ಲಿ ಕಾಯ್ದಿರಿಸಿಕೊಳ್ಳಬಹುದು. 120 ರೂಗಳ ಡೆಲಿಗೇಟ್​ ಪಾಸ್​ ಸಹ ಲಭ್ಯವಿದೆ.

ಚಿತ್ರದಲ್ಲಿ 'ಕಟಕ' ಚಿತ್ರದ ಪೋಷಕ ಪಾತ್ರದಲ್ಲಿ ಗಮನ ಸೆಳೆದಿದ್ದ ಮಾಧವ ಕಾರ್ಕಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇವರ ನಟನೆ ಸ್ವಾಭಾವಿಕವಾಗಿದ್ದು ಚಿತ್ರದ ಯಶಸ್ಸಿಗೆ ಪೂರಕವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಚಿತ್ರಕ್ಕೆ ಶ್ರೀಧರ್​ ಬನವಾಸಿಯವರು ಕಥೆ ಬರೆದಿದ್ದು ಭಾಸ್ಕರ್​ ಬಂಜೆರಾ ಅವರ ಸಂಭಾಷಣೆಯಿದೆ. ಅರ್ಜುನ್​ ರಾಮು ಅವರ ಹಿನ್ನಲೆ ಸಂಗೀತ ಮತ್ತು ಬಿ.ಎಸ್​ ಸಂಕೇತ್​ ಅವರ ಸಂಕಲನ ಚಿತ್ರಕ್ಕಿದೆ.
ಚಿತ್ರವು ಸಂಪೂರ್ಣ ನುರಿತ ತಂತ್ರಜ್ಞರಿಂದ ತಯಾರಾಗಿದೆ.

ದಾದಾಸಾಹೇಬ್​ ಪಾಲ್ಕೆ ವಿಜೇತ ಚಿತ್ರವು ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ. ರೋಮ್​ ಇಂಡಿಪೆಂಡೆಂಟ್​ ಪ್ರಿಸ್ಮಾ ಅವಾರ್ಡ್​, ಆರ್ಫ್​ ಬರ್ಲಿನ್​ ಇಂಟರ್​ ನ್ಯಾಷನಲ್​ ಅವಾರ್ಡ್​ ಚಿತ್ರಕ್ಕೆ ಲಭಿಸಿದೆ.

ದಿ ಬೆಸ್ಟ್​ ಆ್ಯಕ್ಟರ್ವು​ ಕಿರುಚಿತ್ರ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.
ಬೆಳಗಾವಿಯ ಮೂವಿಂಗ್​ ಪಿಕ್ಚರ್ಸ್​ ಫೆಸ್ಟಿವಲ್​, ಕೋಲ್ಕತ್ತದಲ್ಲಿ ನಡೆದ ಎನ್​ ಇಜೆಡ್​ ಇಂಟರ್​ ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್​, ಜೋಧಪುರದ ಇಂಟರ್​ ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್​ ಮತ್ತು ಲಂಡನ್ನಿನ ಇಂಟರ್​ ನ್ಯಾಷನಲ್​ ಫಿಲ್ಮ್​ ಮೇಕರ್​ ಫೆಸ್ಟಿವಲ್​ ಗಳಲ್ಲಿ ಪ್ರದರ್ಶನಗೊಂಡು ಸೈ ಎನಿಸಿಕೊಂಡಿದೆ.

Currently unrated

Comments